ಅಜ್ಜಂಪುರದಲ್ಲಿ ಯುವ ಸೌರಭ ಕಾರ್ಯಕ್ರಮ
ಅಜ್ಜಂಪುರ:ಉದಯೋನ್ಮುಖ ಯುವ ಕಲಾವಿದರ ಪ್ರತಿಭೆಗೆ ಯುವ ಸೌರಭ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದ್ದು ಇಂತಹ ವೇದಿಕೆಗಳ ಮೂಲಕ ಪ್ರತಿಭೆಗಳು ಮುನ್ನೆಲೆಗೆ ಬರುವಂತಾಗಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಹೇಳಿದರು.
ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಯುವ ಸೌರಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಯುವಕರಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಹೊರ ತರಲು ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯುವ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸುತ್ತಿದ್ದು ಅದನ್ನು ಬಳಸಿಕೊಳ್ಳುವತ್ತ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಮುಂದಾಗಬೇಕಿದೆ ಎಂದರು.
ಜಿಲ್ಲೆಯ ವಿವಿದಡೆಯಿಂದ ಆಗಮಿಸಿದ್ದ ವಿವಿಧ ಕಲಾವಿದರಿಂದ ಸುಗಮ ಸಂಗೀತ, ಭರತ ನಾಟ್ಯ, ಜನಪದಗೀತೆ, ವೀರಭದ್ರ ಕುಣಿತ, ಜಾನಪದ ನೃತ್ಯ ನಾಟಕ ಪ್ರದರ್ಶನ ಜರುಗಿದವು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಾಜಣ್ಣ ಕೆ, ಕನ್ನಡ ವಿಭಾಗದ ಮುಖ್ಯಸ್ಥರಾದ ಮಹಾಲಿಂಗಪ್ಪ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಆನಂದ ಆರ್, ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಾರದ ಡಾ.ಆನಂದ ಎನ್.ಎಲ್, ಶಿಕ್ಷಕರಾದ ಸುರೇಂದ್ರ ನಾಯಕ್, ಕಲಾವಿದರಾದ ಪ್ರಣಮ್ಯ ಕಶ್ಯಪ್, ಸಂಜಯ್ ಆರ್, ಹರೀಶ್, ಶ್ರೀರಕ್ಷಾ, ಅಣ್ಣಪ್ಪ ಕೆ.ಎಂ, ಅವಿನಾಶ್, ಕುಮಾರ್ ಹಾಗೂ ಕಾಲೇಜಿನ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು ಇದ್ದರು.